|
ಅರ್ಜುನ
ಉವಾಚ
|
|
1
|
ಏವಂ ಸತತ-ಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ ।
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗ-ವಿತ್ತಮಾಃ ॥ |
|
ಅರ್ಜುನನು ಕೇಳಿದನು - ಹೀಗೆ ನಿತ್ಯವೂ ನಿನ್ನನ್ನೆ ಧ್ಯಾನಿಸುತ್ತ ಸೇವೆಗೈಯುವ ಭಕ್ತರು ಮತ್ತು ನಾಶವಿರದ ಅವ್ಯಕ್ತ ತತ್ವವಾದ ಲಕ್ಷ್ಮಿಯ ಆರಾಧಕರು ಇವರಲ್ಲಿ ಯಾರು ಶ್ರೇಷ್ಠ ಯೋಗಿಗಳು? |
|
ಭಗವಾನ್
ಉವಾಚ
|
|
2
|
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯ-ಯುಕ್ತಾ ಉಪಾಸತೇ ।
ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತ-ತಮಾ ಮತಾಃ ॥ |
|
ಕೃಷ್ಣನು ಹೇಳಿದನು - ಪೂರ್ಣ ನಂಬಿಕೆಯಿಂದ ಕೂಡಿ ನನ್ನಲ್ಲೆ ಮನಸ್ಸಿಟ್ಟು ನನ್ನನ್ನೆ ಯಾವಾಗಲೂ ಧ್ಯಾನಯೋಗದಿಂದ ಆರಾಧಿಸುವವರೆ ಶ್ರೇಷ್ಠಯೋಗಿಗಳು ಎಂದು ನನ್ನ ಅಭಿಪ್ರಾಯ. |
|
3
|
ಯೇ ತ್ವಕ್ಷರಮನಿರ್ದೇಶ್ಯಂ ಅವ್ಯಕ್ತಂ ಪರ್ಯುಪಾಸತೇ ।
ಸರ್ವತ್ರ-ಗಮಚಿಂತ್ಯಂ ಚ ಕೂಟ-ಸ್ಥಮಚಲಂ ಧ್ರುವಮ್ ॥ |
|
4
|
ಸನ್ನಿಯಮ್ಯೇಂದ್ರಿಯ-ಗ್ರಾಮಂ ಸರ್ವತ್ರ ಸಮ-ಬುದ್ಧಯಃ ।
ತೇ ಪ್ರಾಪ್ನುವಂತಿ ಮಾಮೇವ ಸರ್ವ-ಭೂತ-ಹಿತೇ ರತಾಃ ॥ |
|
ನಾಶವಿಲ್ಲದ, ಮಾತಿಗೂ-ಮನಸ್ಸಿಗೂ ಪೂರ್ತಿ ಸಿಗದ, ಆಕಾಶದಲ್ಲಿ ಇದ್ದು ಎಲ್ಲ್ಲೆಡೆ ಇರುವ, ವಿಕಾರ ಇಲ್ಲದ, ಸ್ಥಿರವಾದ, ಶಾಶ್ವತವಾದ ತತ್ವ ಅವ್ಯಕ್ತ. ಇಂದ್ರಿಯಗಳನ್ನೆಲ್ಲ ನಿಗ್ರಹಿಸಿ, ಎಲ್ಲೆಡೆಯೂ ಸಮದೃಷ್ಟಿಯಿಂದ ಎಲ್ಲ ಜೀವಿಗಳಿಗೂ ಒಳ್ಳೆಯದನ್ನು ಬಯಸುತ್ತ ಆ ಅವ್ಯಕ್ತವನ್ನು ಆರಾಧಿಸುವವರೂ ನನ್ನನ್ನೇ ಸೇರುತ್ತಾರೆ. |
|
5
|
ಕ್ಲೇಶೋಽಧಿಕ-ತರಸ್ತೇಷಾಂ ಅವ್ಯಕ್ತಾಸಕ್ತ-ಚೇತಸಾಮ್ ।
ಅವ್ಯಕ್ತಾ ಹಿ ಗತಿರ್ದುಃಖಂ ದೇಹ-ವದ್ಭಿರವಾಪ್ಯತೇ ॥ |
|
ಅವ್ಯಕ್ತ ತತ್ವದಲ್ಲೆ ಮನಸ್ಸಿಟ್ಟವರಿಗೆ ಶ್ರಮ ತುಂಬಾ ಇದೆ. ಅವ್ಯಕ್ತದ ಮೂಲಕ ಮೋಕ್ಷ ಪಡೆಯಲು ಸಾಧಕರಿಗೆ ದುಃಖ ಆಗಲಿದೆ. |
|
6
|
ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್-ಪರಾಃ ।
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ ॥ |
|
ನನ್ನ ಸೇವೆಗಳನ್ನಷ್ಟೇ ನಡೆಸುವವರು ಮಾಡಿದ್ದನ್ನೆಲ್ಲ ನನಗೆ ಅರ್ಪಿಸುತ್ತಾರೆ. ಬೇರೆ ಯಾರನ್ನೂ ಭಜಿಸದೆ ನನ್ನನ್ನೆ ಧ್ಯಾನಿಸುತ್ತ ಆರಾಧಿಸುವರು. |
|
7
|
ತೇಷಾಮಹಂ ಸಮುದ್ಧರ್ತಾ ಮೃತ್ಯು-ಸಂಸಾರ-ಸಾಗರಾತ್ ।
ಭವಾಮಿ ನ-ಚಿರಾತ್ ಪಾರ್ಥ ಮಯ್ಯಾವೇಶಿತ-ಚೇತಸಾಮ್ ॥ |
|
ಓ ಪಾರ್ಥನೆ, ನನ್ನಲ್ಲೆ ಮನಸ್ಸಿಟ್ಟವರನ್ನು ನಾನು ಸಮುದ್ರದಂತಿರುವ ಮರಣಶೀಲ ಸಂಸಾರದಿಂದ ಕೂಡಲೇ ಪೂರ್ತಿಯಾಗಿ ಬಿಡುಗಡೆಗೊಳಿಸುತ್ತೇನೆ. |
|
8
|
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ ।
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ॥ |
|
ನನ್ನಲ್ಲಿಯೆ ಮನಸ್ಸನ್ನು ಇಡು. ನನ್ನಲ್ಲಿ ಬುದ್ಧಿಯನ್ನೂ ನಿಶ್ಚಯಿಸು. ಅದರ ಫಲವಾಗಿ ನನ್ನಲ್ಲೆ ನೆಲೆಸುವೆ, ಸಂಶಯಪಡಬೇಡ. |
|
9
|
ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ ।
ಅಭ್ಯಾಸ-ಯೋಗೇನ ತತೋ ಮಾಮಿಚ್ಛಾsಪ್ತುಂ ಧನಂ-ಜಯ ॥ |
|
ಓ ಧನಂಜಯನೆ, ಒಂದೊಮ್ಮೆ ಒಳಮನಸ್ಸನ್ನು ಗಟ್ಟಿಯಾಗಿ ನನ್ನಲ್ಲಿ ನಿಲ್ಲಿಸಲು ಸಾಧ್ಯವಾಗದಿದ್ದರೆ, ಅಭ್ಯಾಸದ ರೀತಿಯಲ್ಲಿ ಮತ್ತೆ ಮತ್ತೆ ನನ್ನನ್ನು ಪಡೆಯಲು ಬಯಸು. |
|
10
|
ಅಭ್ಯಾಸೇಽಪ್ಯಸಮರ್ಥೋಽಸಿ ಮತ್-ಕರ್ಮ-ಪರಮೋ ಭವ ।
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ॥ |
|
ಧ್ಯಾನದ ಅಭ್ಯಾಸವೂ ಸಾಧ್ಯವಾಗದಿದ್ದರೆ, ನನ್ನ ಕೆಲಸಗಳನ್ನೆ ಮುಖ್ಯವಾಗಿ ಮಾಡುತ್ತಿರು. ನನ್ನ ಪೂಜೆಗಾಗಿ ಎಂದು ಕರ್ಮಗಳನ್ನು ಮಾಡುತ್ತಲೆ ಸಿದ್ಧಿಯನ್ನು ಪಡೆಯುವೆ. |
|
11
|
ಅಥೈತದಪ್ಯಶಕ್ತೋಽಸಿ ಕರ್ತುಂ ಮದ್ಯೋಗಮಾಶ್ರಿತಃ ।
ಸರ್ವ-ಕರ್ಮ-ಫಲ-ತ್ಯಾಗಂ ತತಃ ಕುರು ಯತಾತ್ಮ-ವಾನ್ ॥ |
|
ಮತ್ತೆ ಇದನ್ನೂ ಮಾಡಲು ಸಾಧ್ಯವಾಗದಿದ್ದರೆ, ಮನಸ್ಸನ್ನು ನಿಗ್ರಹಿಸಿ ನನ್ನ ನೆನಪು ಮಾಡಿಕೊಂಡು ಎಲ್ಲ ಕರ್ಮಗಳ ಫಲದ ಆಸೆಯನ್ನು ಬಿಡು. |
|
12
|
ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ ಧ್ಯಾನಂ ವಿಶಿಷ್ಯತೇ ।
ಧ್ಯಾನಾತ್ ಕರ್ಮ-ಫಲ-ತ್ಯಾಗಃ ತ್ಯಾಗಾಚ್ಛಾಂತಿರನಂತರಮ್ ॥ |
|
ಜ್ಞಾನವಿಲ್ಲದ ಅಭ್ಯಾಸಕ್ಕಿಂತ ಜ್ಞಾನ ಶ್ರೇಷ್ಠ. ಕೇವಲ ಜ್ಞಾನಕ್ಕಿಂತ ತಿಳಿದು ಧ್ಯಾನಿಸುವುದು ಶ್ರೇಷ್ಠ. ಕೇವಲ ಧ್ಯಾನಕ್ಕಿಂತ ಕರ್ಮಫಲದ ಆಸೆ ಬಿಟ್ಟ ಧ್ಯಾನವು ಶ್ರೇಷ್ಠ. ಮತ್ತೆ ಕರ್ಮದ ಫಲದ ಆಸೆ ತೊರೆದು ಮಾಡಿದ ಧ್ಯಾನದಿಂದ ಮೋಕ್ಷ ಆಗಲಿದೆ. |
|
13
|
ಅದ್ವೇಷ್ಟಾ ಸರ್ವ-ಭೂತಾನಾಂ ಮೈತ್ರಃ ಕರುಣ ಏವ ಚ ।
ನಿರ್ಮಮೋ ನಿರಹಂಕಾರಃ ಸಮ-ದುಃಖ-ಸುಖಃ ಕ್ಷಮೀ ॥ |
|
14
|
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢ-ನಿಶ್ಚಯಃ ।
ಮಯ್ಯರ್ಪಿತ-ಮನೋ-ಬುದ್ಧಿಃ ಯೋ ಮದ್ಭಕ್ತಃ ಸ ಮೇ ಪ್ರಿಯಃ ॥ |
|
ಎಲ್ಲರನ್ನೂ ದ್ವೇಷಿಸದವನು, ಸಹಾಯ ಮಾಡುವವನು, ಕರುಣಿಯು, ನಾನು-ನನ್ನದು ಎಂಬ ಅಭಿಮಾನ ಇಲ್ಲದವನು, ದುಃಖ ಬಂದಾಗ ಕುಗ್ಗದೆ, ಸುಖ ಆದಾಗ ಹಿಗ್ಗದೆ ಇರುವವನು, ಕ್ಷಮಾಶೀಲನು, ನಿತ್ಯಸಂತೋಷಿಯು, ಧ್ಯಾನವನ್ನು ನಡೆಸುವವನು, ಮನಸ್ಸನ್ನೂ ನಿಗ್ರಹಿಸಿದವನು, ಸ್ಥಿರವಾದ ತತ್ವನಿಶ್ಚಯ ಉಳ್ಳವನು, ಮನಸ್ಸು-ಬುದ್ಧಿಗಳನ್ನು ನನ್ನಲ್ಲಿ ಒಪ್ಪಿಸಿದವನು, ಯಾರೆ ಆದರೂ ನನ್ನ ಭಕ್ತನು ನನಗೆ ಇಷ್ಟನು. |
|
15
|
ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ ।
ಹರ್ಷಾಮರ್ಷ-ಭಯೋದ್ವೇಗೈಃ ಮುಕ್ತೋ ಯಃ ಸ ಚ ಮೇ ಪ್ರಿಯಃ ॥ |
|
ಯಾರನ್ನೂ ರೇಗಿಸದವನು, ಯಾರಿಂದಲೂ ಉದ್ವೇಗಕ್ಕೆ ಒಳಗಾಗದವನು, ಸಂತೋಷ, ಅಸಹನೆ, ಅಂಜಿಕೆ, ಆವೇಶಗಳನ್ನು ಬಿಟ್ಟವನು ಯಾರೆ ಆದರೂ ನನಗೆ ಇಷ್ಟನು. |
|
16
|
ಅನಪೇಕ್ಷಃ ಶುಚಿರ್ದಕ್ಷಃ ಉದಾಸೀನೋ ಗತ-ವ್ಯಥಃ ।
ಸರ್ವಾರಂಭ-ಪರಿತ್ಯಾಗೀ ಯೋ ಮದ್-ಭಕ್ತಃ ಸ ಮೇ ಪ್ರ‍್ರಿಯಃ ॥ |
|
ಏನನ್ನೂ ಬಯಸದವನು, ಶುದ್ಧನು, ಸಮರ್ಥನು, ಯಾವುದನ್ನೂ ಹಚ್ಚಿಕೊಳ್ಳದವನು, ಬಾಧೆ ಪಡೆದವನು, ತನ್ನದಲ್ಲದ ಎಲ್ಲ ಕೆಲಸಗಳನ್ನು ಪೂರ್ತಿ ಬಿಟ್ಟವನು, ನನ್ನ ಭಕ್ತನು ಯಾರೆ ಆದರೂ ನನಗೆ ಇಷ್ಟನು. |
|
17
|
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ।
ಶುಭಾಶುಭ-ಪರಿತ್ಯಾಗೀ ಭಕ್ತಿ-ಮಾನ್ ಯಃ ಸ ಮೇ ಪ್ರಿಯಃ ॥ |
|
ಸಂತಸ ಪಡುವುದಿಲ್ಲ, ದ್ವೇಷಿಸುವುದೂ ಇಲ್ಲ, ದುಃಖಿಸುವುದಿಲ್ಲ, ಬಯಸುವುದಿಲ್ಲ, ಒಳಿತು-ಕೆಡುಕುಗಳ ಬಗ್ಗೆ ಯೋಚನೆ ಬಿಟ್ಟವನು, ಭಕ್ತಿಯುಳ್ಳವನು ಯಾರೆ ಆದರೂ ನನಗೆ ಇಷ್ಟನು. |
|
18
|
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪ-ಮಾನಯೋಃ ।
ಶೀತೋಷ್ಣ-ಸುಖ-ದುಃಖೇಷು ಸಮಃ ಸಂಗ-ವಿವರ್ಜಿತಃ ॥ |
|
19
|
ತುಲ್ಯ-ನಿಂದಾ-ಸ್ತುತಿರ್ಮೌನೀ ಸಂತುಷ್ಟೋ ಯೇನ-ಕೇನ-ಚಿತ್ ।
ಅನಿಕೇತಃ ಸ್ಥಿರ-ಮತಿಃ ಭಕ್ತಿ-ಮಾನ್ ಮೇ ಪ್ರಿಯೋ ನರಃ ॥ |
|
ವೈರಿ-ಗೆಳೆಯರಲ್ಲಿ ಭೇದ ಎಣಿಸದವನು, ಗೌರವ-ತಿರಸ್ಕಾರಗಳಲ್ಲಿ, ಶೀತ-ಉಷ್ಣಗಳಲ್ಲಿ, ಸುಖ-ದುಃಖಗಳಲ್ಲಿ, ತೆೆಗಳಿಕೆ-ಹೊಗಳಿಕೆಗಳಲ್ಲಿ ಒಂದೇ ರೀತಿಯಾಗಿ ಇರುವವನು, ಎಲ್ಲ ಸಂಬಂಧಗಳನ್ನು ಕಳಚಿಕೊಂಡವನು, ಚಿಂತನಶೀಲನು, ಯಾವುದರಿಂದಲೂ ಸಂತೋಷ ಪಡುವವನು, ಒಂದೇ ಕಡೆ ಇರಲು ಬಯಸದವನು, ದೇವನ ಅರಿವು ಗಟ್ಟಿಯುಳ್ಳವನು, ಭಕ್ತಿ ಉಳ್ಳವನು ನನಗೆ ಇಷ್ಟನಾದ ಮನುಷ್ಯನು. |
|
20
|
ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ ।
ಶ್ರದ್ದಧಾನಾ ಮತ್-ಪರಮಾಃ ಭಕ್ತಾಸ್ತೇಽತೀವ ಮೇ ಪ್ರಿಯಾಃ ॥ |
|
ನಾನು ಸರ್ವೋತ್ತಮನೆಂದು ನಂಬಿ ಧರ್ಮ ಮೋಕ್ಷಗಳಿಗೆ ಸಂಬಂಧಿಸಿದ ಈ ಸಾಧನೆಯನ್ನು ಹೇಳಿದಂತೆ ಪೂರ್ತಿ ಆಚರಿಸುವವರು ನನ್ನ ಭಕ್ತರು ಯಾರೆ ಆದರೂ ನನಗೆ ತುಂಬಾ ಇಷ್ಟರು. |