|
1
|
ತಂ ತಥಾ ಕೃಪಯಾಽಽವಿಷ್ಟಂ ಅಶ್ರು-ಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಂ ಉವಾಚ ಮಧು-ಸೂದನಃ ॥ |
|
ಹೀಗೆ ಕರುಣೆಗೆ ಒಳಗಾಗಿ ಕಣ್ಣೀರು ತುಂಬಿ ಕಣ್ಣು ಮಸುಕಾಗಿ, ದುಃಖದಿಂದ ಕೂತಿರುವ ಅರ್ಜುನನಿಗೆ ಕೃಷ್ಣನು ಹೇಳುತ್ತಾನೆ- |
|
2
|
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯ-ಜುಷ್ಟಮಸ್ವರ್ಗ್ಯಂ ಅಕೀರ್ತಿ-ಕರಮರ್ಜುನ ॥ |
|
ಓ ಅರ್ಜುನಾ, ಅಪಕೀರ್ತಿ ಕೊಡುವ, ಸ್ವರ್ಗ ತಪ್ಪುವ, ತಿಳಿದವರು ಒಪ್ಪದ ಈ ತಪ್ಪುಕಲ್ಪನೆ ಈ ಯುದ್ಧಕಾಲದಲ್ಲಿ ನಿನ್ನನ್ನು ಏಕೆ ಕಾಡಿತು? |
|
3
|
ಕ್ಲೈಬ್ಯಂ ಮಾಸ್ಮ ಗಮಃ ಪಾರ್ಥ ನೈತತ್ ತ್ವಯ್ಯುಪ-ಪದ್ಯತೇ ।
ಕ್ಷುದ್ರಂ ಹೃದಯ-ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂ ತಪ ॥ |
|
ಪೃಥೆಯ ಮಗನೇ, ಷಂಡತನವನ್ನು ಹೊಂದಬೇಡ. ನಿನ್ನಲ್ಲಿ ಇದು ಸೇರುವುದಿಲ್ಲ. ಶತ್ರುಸಂಹಾರಕನೇ, ಈ ಅತಿ ಕ್ಷುಲ್ಲಕ ಮಾನಸಿಕ ತುಮುಲವನ್ನು ಬಿಟ್ಟು ಎದ್ದು ನಿಲ್ಲು. ಇನ್ನೂ ಬೇರೆ ಹೆಚ್ಚಿನದ್ದನ್ನು ಯೋಚಿಸು. |
|
ಅರ್ಜುನ
ಉವಾಚ
|
|
4
|
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧು-ಸೂದನ ।
ಇಷುಭಿಃ ಪ್ರತಿ-ಯೋತ್ಸ್ಯಾಮಿ ಪೂಜಾರ್ಹಾವರಿ-ಸೂದನ ॥ |
|
ಅರ್ಜುನನು ಪ್ರಶ್ನಿಸುತ್ತಾನೆ - ಓ ಮಧುಸೂದನನೇ, ಯುದ್ಧದಲ್ಲಿ ಭೀಷ್ಮನನ್ನು ಮತ್ತೆ ದ್ರೋಣನನ್ನು ನಾನು ಹೇಗೆ ಬಾಣಗಳಿಂದ ಚುಚ್ಚಲಿ? ಅರಿಸೂದನನೇ, ಅವರು ಗೌರವಕ್ಕೆ ಪಾತ್ರರಲ್ಲವೇ ? |
|
5
|
ಗುರೂನಹತ್ವಾ ಹಿ ಮಹಾನು-ಭಾವಾನ್
ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ ।
ಹತ್ವಾಽರ್ಥ-ಕಾಮಾಂಸ್ತು ಗುರೂನಿಹೈವ
ಭುಂಜೀಯ ಭೋಗಾನ್ ರುಧಿರ-ಪ್ರದಿಗ್ಧಾನ್ ॥ |
|
ಜ್ಞಾನಿಗಳಾದ ಗುರುಗಳನ್ನು ಕೊಲ್ಲದೇ ಈ ನೆಲದಲ್ಲಿ ಭಿಕ್ಷೆ ಬೇಡಿ ತಿನ್ನುವುದು ಒಳ್ಳೆಯದು ತಾನೆ! ರಾಜ್ಯಸಂಪತ್ತು ಬಯಸಿದ ಈ ಗುರುಗಳನ್ನೇ ಕೊಂದು ರಕ್ತಸಿಕ್ತವಾದ ಭೋಗವನ್ನು ಉಣ್ಣಬೇಕಾ ! |
|
6
|
ನ ಚೈತದ್ ವಿದ್ಮಃ ಕತರನ್ನೋ ಗರೀಯೋ
ಯದ್ವಾ ಜಯೇಮ ಯದಿ ವಾ ನೋ ಜಯೇಯುಃ ।
ಯಾನೇವ ಹತ್ವಾ ನ ಜಿಜೀವಿಷಾಮಃ
ತೇಽವ-ಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥ |
|
ಇವೆರಡರಲ್ಲಿ ಯಾವುದು ನಮಗೆ ಹೆಚ್ಚು ಎಂದೇ ಗೊತ್ತಾಗುತ್ತಿಲ್ಲ. ನಾವು ಗೆಲ್ಲುವೆವೋ ಅಥವಾ ನಮ್ಮನ್ನು ಗೆಲ್ಲುವರೋ ಎಂದೂ ತಿಳಿಯದು! ಯಾರನ್ನು ಕೊಂದು ಬದುಕಲು ಬಯಸುವುದಿಲ್ಲವೋ ಅವರೇ ಕೌರವರು ನಮ್ಮೆದುರು ಹೋರಾಟಕ್ಕೆ ತಯಾರಾಗಿದ್ದಾರೆ. |
|
7
|
ಕಾರ್ಪಣ್ಯ-ದೋಷೋಪಹತ-ಸ್ವಭಾವಃ
ಪೃಚ್ಛಾಮಿ ತ್ವಾ ಧರ್ಮ-ಸಮ್ಮೂಢ-ಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ॥ |
|
ನನ್ನದೇ ದೌರ್ಬಲ್ಯದ ದೋಷ ನನ್ನತನವನ್ನು ಮುಚ್ಚಿದೆ. ಧರ್ಮ ಯಾವುದೆಂದು ತೀರ್ಮಾನಿಸಲಾಗದೆ ನಿನ್ನನ್ನೇ ಪ್ರಶ್ನಿಸುತ್ತಿರುವೆನು. ಯಾವುದು ನನಗೆ ಒಳಿತೆಂದು ಸಂಶಯ ಹೋಗುವಂತೆ ಹೇಳು. ನಾನು ನಿನ್ನ ಶಿಷ್ಯ, ನಿನ್ನನ್ನೆ ಶರಣಾದ ನನ್ನನ್ನು ತಿದ್ದು. |
|
8
|
ನ ಹಿ ಪ್ರ-ಪಶ್ಯಾಮಿ ಮಮಾಪ-ನುದ್ಯಾತ್
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ ।
ಅವಾಪ್ಯ ಭೂಮಾವಸಪತ್ನಮೃದ್ಧಂ
ರಾಜ್ಯಂ ಸುರಾಣಾಮಪಿ ಚಾಽಧಿಪತ್ಯಮ್ ॥ |
|
ಈ ನೆಲದಲ್ಲಿ ವೈರಿಗಳೆ ಇಲ್ಲದ ಸಮೃದ್ಧವಾದ ರಾಜ್ಯ ಸಿಕ್ಕರೂ ಮತ್ತೆ ಸ್ವರ್ಗದ ದೊರೆತನ ದಕ್ಕಿದರೂ ನನಗೆ ಇಂದ್ರಿಯಗಳ ಹಿಂಡುವ ಈ ದುಃಖ ಹೇಗೆ ಕಳೆದೀತು ಎಂದೇ ತಿಳಿಯದಾಗಿದೆ. |
|
9
|
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂ-ತಪಃ ।
ನ ಯೋತ್ಸ್ಯ ಇತಿ ಗೋವಿಂದಂ ಉಕ್ತ್ವಾ ತೂಷ್ಣೀಂ ಬಭೂವ ಹ ॥ |
|
ತುಂಬ ಬಳಲಿದ ಅರ್ಜುನನು ಇಂದ್ರಿಯಗಳ ಸ್ವಾಮಿಯಾದ ಗೋವಿಂದನಲ್ಲಿ ಹೀಗೆ ಹೇಳಿ, ನಾನು ಯುದ್ಧ ಮಾಡುವುದಿಲ್ಲ ಎಂದು ತಿಳಿಸಿ ಸುಮ್ಮನೆ ಇದ್ದನು. |
|
10
|
ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ ॥ |
|
ಓ ಧೃತರಾಷ್ಟ್ರನೇ, ಎರಡು ಸೈನ್ಯದ ನಡುವೆ ದುಃಖಗೊಂಡು ಕೂತ ಅರ್ಜುನನಿಗೆ ಕೃಷ್ಣನು ನಗುತ್ತಲೇ ಹೀಗೆ ಹೇಳಿದನು - |
|
11
|
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ ।
ಗತಾಸೂನಗತಾಸೂಂಶ್ಚ ನಾನು-ಶೋಚಂತಿ ಪಂಡಿತಾಃ ॥ |
|
ನೀನು ದುಃಖ ಪಡಬಾರದವರಿಗಾಗಿ ದುಃಖಿಸುತ್ತಿರುವೆ. ತಿಳಿದವರು ಆಡದ ಮಾತುಗಳನ್ನು ಹೇಳುತ್ತಿರುವೆ. ತಿಳಿದವರಾರೂ ಸತ್ತವರ ಬಗ್ಗೆ ಮತ್ತು ಸಾಯದವರ ಬಗ್ಗೆ ದುಃಖಿಸುವುದಿಲ್ಲ. |
|
12
|
ನತ್ವೇವಾಹಂ ಜಾತು ನಾಽಸಂ ನ ತ್ವಂ ನೇಮೇ ಜನಾಧಿ-ಪಾಃ ।
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ॥ |
|
ನಾನು, ನೀನು, ಮತ್ತೆ ಈ ರಾಜರೂ ಹಿಂದೆ ಇದ್ದವರೆ. ಮುಂದೆಯೂ ನಾವೆಲ್ಲರೂ ಎಂದೂ ಇರುವವರೇ. |
|
13
|
ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರ-ಪ್ರಾಪ್ತಿಃ ಧೀರಸ್ತತ್ರ ನ ಮುಹ್ಯತಿ ॥ |
|
ದೇಹದಲ್ಲಿರುವ ಜೀವನಿಗೆ ಈ ದೇಹದಲ್ಲಿ ಕೌಮಾರ ಕಳೆದು ಯೌವ್ವನ ಬರಲಿದೆ, ಬಳಿಕ ಮುಪ್ಪು. ಹಾಗೆಯೇ ಮತ್ತೆ ಬೇರೆ ದೇಹ ಬರಲಿದೆ. ಈ ಬದಲಾವಣೆ ವಿಷಯದಲ್ಲಿ ತಿಳಿದವನು ಮೋಹಗೊಳ್ಳನು. |
|
14
|
ಮಾತ್ರಾ-ಸ್ಪರ್ಶಾಸ್ತು ಕೌಂತೇಯ ಶೀತೋಷ್ಣ-ಸುಖ-ದುಃಖ-ದಾಃ ।
ಆಗಮಾಪಾಯಿನೋಽನಿತ್ಯಾಃ ತಾಂಸ್ತಿತಿಕ್ಷಸ್ವ ಭಾರತ ॥ |
|
ಓ ಕುಂತಿಪುತ್ರನೇ, ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳು ಎಂಬ ಐದು ವಿಷಯಗಳ ಸಂಪರ್ಕಗಳೇ ತಂಪು-ಬಿಸಿಗಳಿಗೆ, ಸುಖ-ದುಃಖಗಳಿಗೆ ಕಾರಣಗಳು. ಇವು ಬರುತ್ತವೆ, ಹೋಗುತ್ತವೆ. ನಿರಂತರವಾಗಿ ಇರವು. ಓ ಭರತವಂಶದವನೇ, ಅವುಗಳನ್ನು ಸಹಿಸಿಕೋ. |
|
15
|
ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ ।
ಸಮ-ದುಃಖ-ಸುಖಂ ಧೀರಂ ಸೋಽಮೃತ-ತ್ವಾಯ ಕಲ್ಪತೇ ॥ |
|
ಓ ಪುರುಷಶ್ರೇಷ್ಠನೇ, ಯಾವ ವ್ಯಕ್ತಿ ಧೀರನಾಗಿ ಸುಖ-ದುಃಖಗಳನ್ನು ಸಮವಾಗಿ ಅನುಭವಿಸುತ್ತಾನೋ, ಆತನನ್ನು ಈ ವಿಷಯಗಳು ವ್ಯಥೆಪಡಿಸುವುದಿಲ್ಲ. ಆತ ಸಾವನ್ನು ಗೆಲ್ಲುತ್ತಾನೆ. |
|
16
|
ನಾಸತೋ ವಿದ್ಯತೇಽಭಾವೋ ನಾಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋಂಽತಃ ತ್ವನಯೋಸ್ತತ್ತ್ವ-ದರ್ಶಿಭಿಃ ॥ |
|
ಅಸತ್ (ಇಲ್ಲದ) ವಸ್ತುವಿಗೆ ಎಂದೂ ಇರುವಿಕೆ ಇಲ್ಲ. ಸತ್ (ಇರುವ) ವಸ್ತು ಯಾವುದೂ ಎಂದೂ ಇಲ್ಲವಾಗದು. ವಸ್ತುವಿನ ನೈಜತೆಯನ್ನು ಅರಿತವರು ಈ ಎರಡೂ ಸಂಗತಿಗಳ ನಿಶ್ಚಯ ಕಂಡವರು. |
|
17
|
ಅವಿನಾಶಿ ತು ತದ್ ವಿದ್ಧಿ ಯೇನ ಸರ್ವಮಿದಂ ತತಮ್ ।
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ ಕರ್ತುಮರ್ಹತಿ ॥ |
|
ಇದೆಲ್ಲವನ್ನು ತುಂಬಿ ಮೀರಿ ನಿಂತವನು ನಾಶವಿಲ್ಲದವನು. ಯಾವುದೇ ವಿಕಾರಕ್ಕೂ ಬಗ್ಗದ ದೇವನ ನಾಶವನ್ನು ಯಾರಿಂದಲೂ ಮಾಡಲಾಗದು. |
|
18
|
ಅಂತ-ವಂತ ಇಮೇ ದೇಹಾಃ ನಿತ್ಯಸ್ಯೋಕ್ತಾಃ ಶರೀರಿಣಃ ।
ಅನಾಶಿನೋಽಪ್ರ-ಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ ॥ |
|
ದೇಹ ಹೊತ್ತ ಈ ಜೀವನ ಈ ದೇಹಗಳೆಲ್ಲ ನಾಶವಾಗುವವುಗಳೆ ಆಗಿವೆ. ಓ ಭಾರತನೆ, ಹಾಗಾಗಿ ಯಾವ ಬಗೆಯ ನಾಶವೇ ಇಲ್ಲದ ದೇವರ ಸೇವೆಯೆಂದು ಯುದ್ಧಮಾಡು. |
|
19
|
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ॥ |
|
ಈತ ಕೊಂದವನೆಂದು, ಮತ್ತೆ ಈತ ಸತ್ತವನೆಂದು ತಿಳಿದವರಿಬ್ಬರೂ ಚೆನ್ನಾಗಿ ತಿಳಿದಿಲ್ಲ. ಇವನು ಕೊಲ್ಲುವುದೂ ಇಲ್ಲ, ಇವನು ಸಾಯುವುದೂ ಇಲ್ಲ. |
|
20
|
ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ॥ |
|
ಈ ಜೀವ ಎಂದೂ ಹುಟ್ಟುವುದಿಲ್ಲ, ಸಾಯುವುದೂ ಇಲ್ಲ. ಈತ ಹಿಂದೆ ಇಲ್ಲದವನಾಗಿ, ಮುಂದೆ ಬಂದವನೆಂಬುದೂ ಸರಿಯಿಲ್ಲ. ಈ ಜೀವನಿಗೆ ಹುಟ್ಟಿಲ್ಲ, ಸಾವಿಲ್ಲ, ವಿಕಾರವಿಲ.್ಲ ದೇಹದಿಂದ ದೇಹಕ್ಕೆ ಪಯಣಿಸುವವನು. ದೇಹಕ್ಕೆ ಹೊಡೆದರೂ ಜೀವ ಸಾಯನು. |
|
21
|
ವೇದಾವಿ-ನಾಶಿನಂ ನಿತ್ಯಂ ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ॥ |
|
ಓ ಪಾರ್ಥ, ಯಾರು ಈ ಜೀವನನ್ನು ಹುಟ್ಟು, ಸಾವು, ವಿಕಾರಗಳಿಲ್ಲದ ನಿತ್ಯನನ್ನಾಗಿ ತಿಳಿದಿದ್ದಾನೋ ಆ ವ್ಯಕ್ತಿ ಯಾರನ್ನು ಹೇಗೆ ಕೊಲ್ಲುವನು? ಯಾರನ್ನು ಹೇಗೆ ಕೊಲ್ಲಿಸುವನು? |
|
22
|
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಽಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನಿ
ಅನ್ಯಾನಿ ಸಂಯಾತಿ ನವಾನಿ ದೇಹೀ ॥ |
|
ಮನುಷ್ಯನು ಹಳೆಯ ಬಟ್ಟೆಗಳನ್ನು ತೊರೆದು ಬೇರೆ ಹೊಸ ಬಟ್ಟೆಗಳನ್ನು ಉಡುತ್ತಾನೆ. ಅದರಂತೆ ಜೀವನು ಹಳತಾದ ದೇಹಗಳನ್ನು ಬಿಟ್ಟು ಬೇರೆ ಹೊಸ ದೇಹಗಳನ್ನು ಸೇರುತ್ತಾನೆ. |
|
23
|
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥ |
|
ಈ ಜೀವನನ್ನು ಆಯುಧಗಳು ತುಂಡರಿಸವು, ಬೆಂಕಿ ಸುಡದು, ನೀರು ತೋಯಿಸದು, ಗಾಳಿ ಒಣಗಿಸದು. |
|
24
|
ಅಚ್ಛೇದ್ಯೋಽಯಮದಾಹ್ಯೋಽಯಂ ಅಕ್ಲೇದ್ಯೋಽಶೋಷ್ಯ ಏವ ಚ ।
ನಿತ್ಯಃ ಸರ್ವ-ಗತ-ಸ್ಥಾಣುಃ ಅಚಲೋಽಯಂ ಸನಾತನಃ ॥ |
|
ಕಡಿಯಲಾಗದ, ಸುಡಲಾಗದ, ತೋಯಿಸಲಾಗದ, ಒಣಗಿಸಲಾಗದ ಇವನು ಜೀವನು ನಿತ್ಯನೂ, ನಿರ್ವಿಕಾರನೂ, ವೇದಶಾಸನಕ್ಕೆ ಬದ್ಧನೂ ಆಗಿದ್ದಾನೆ. ಎಲ್ಲೆಡೆ ಇರುವ ದೇವನ ಪ್ರತಿಬಿಂಬನಿವನು ಜೀವನು ಅಣುವಾಗಿದ್ದಾನೆ. |
|
25
|
ಅವ್ಯಕ್ತೋಽಯಮಚಿಂತ್ಯೋಽಯಂ ಅವಿಕಾರ್ಯೋಽಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನು-ಶೋಚಿತುಮರ್ಹಸಿ ॥ |
|
ಕಣ್ಣಿಗೆ ಕಾಣಿಸದ, ಚಿಂತನೆಗೆ ಸಿಗದ, ವಿಕಾರವಿಲ್ಲದವನು ಇವನು ಎಂದು ಶಾಸ್ತ್ರ ತಿಳಿಸಿದೆ. ಹಾಗಾಗಿ ಹೀಗೆಯೇ ಆತನನ್ನು ನೀನು ತಿಳಿದರೆ ಜೀವನ ಬಗ್ಗೆ ದುಃಖಿಸಬೇಕಾಗಿಲ್ಲ. |
|
26
|
ಅಥ ಚೈನಂ ನಿತ್ಯ-ಜಾತಂ ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾಽಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ॥ |
|
ಓ ಆಜಾನುಬಾಹು ಅರ್ಜುನನೇ, ಈ ಜೀವ ದೇಹದಿಂದ ಹುಟ್ಟುತ್ತಾನೆ ಮತ್ತೆ ಸಾಯುತ್ತಾನೆ ಎಂದು ತಿಳಿದರೂ ಈ ಜೀವನ ಬಗ್ಗೆ ನೀನು ದುಃಖಿಸುವುದು ತರವಲ್ಲ. |
|
27
|
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿ-ಹಾರ್ಯೇಽರ್ಥೇ ನ ತ್ವಂ ಶೋಚಿತುಮರ್ಹಸಿ ॥ |
|
ಹುಟ್ಟಿದವನಿಗೆ ಸಾವು ನಿಶ್ಚಿತ. ಸತ್ತವಗೆ ಹುಟ್ಟೂ ನಿಶ್ಚಿತ. ಹೀಗಿದ್ದಾಗ ಪರಿಹರಿಸಲು ಆಗದ ಈ ವಿಷಯದಲ್ಲಿ ನೀನು ದುಃಖಗೊಳ್ಳುವುದು ಸರಿಯಿಲ್ಲ. |
|
28
|
ಅವ್ಯಕ್ತಾದೀನಿ ಭೂತಾನಿ ವ್ಯಕ್ತ-ಮಧ್ಯಾನಿ ಭಾರತ ।
ಅವ್ಯಕ್ತ-ನಿಧನಾನ್ಯೇವ ತತ್ರ ಕಾ ಪರಿ-ದೇವನಾ ॥ |
|
ಓ ಭಾರತನೆ, ಜೀವಿಗಳ ಹುಟ್ಟು ಕಾಣದು, ಸಾವೂ ಕಾಣದು. ಹುಟ್ಟು-ಸಾವುಗಳ ಮಧ್ಯ ಮಾತ್ರ ವ್ಯಕ್ತವಾಗಿದೆ. ಹೀಗಿರುವಾಗ ಈ ಪರಿಯ ಗೋಳಾಟವೇನು? |
|
29
|
ಆಶ್ಚರ್ಯ-ವತ್ ಪಶ್ಯತಿ ಕಶ್ಚಿದೇನಂ
ಆಶ್ಚರ್ಯ-ವದ್ ವದತಿ ತಥೈವ ಚಾನ್ಯಃ ।
ಆಶ್ಚರ್ಯ-ವಚ್ಚೆೈನಮನ್ಯಃ ಶೃಣೋತಿ
ಶ್ರುತ್ವಾಽಪ್ಯೇನಂ ವೇದ ನಚೈವ ಕಶ್ಚಿತ್ ॥ |
|
ಯಾರಾದರೂ ಈ ಜೀವನನ್ನು ಕಂಡರೆ ಅಚ್ಚರಿಯಂತೆ! ಇನ್ನೊಬ್ಬ ಜೀವನನ್ನು ಹೀಗಂತ ಹೇಳಿದರೂ ಅಚ್ಚರಿಯೆ! ಮತ್ತೊಬ್ಬ ಆತನನ್ನು ಕೇಳಿಕೊಂಡರೂ ಆಶ್ಚರ್ಯವೇ ಸರಿ. ಇವನನ್ನು ಕೇಳಿದರೂ ಯಾರೊಬ್ಬನೂ ಏನೊಂದೂ ತಿಳಿಯಲಾರ. |
|
30
|
ದೇಹೀ ನಿತ್ಯಮವಧ್ಯೋಽಯಂ ದೇಹೇ ಸರ್ವಸ್ಯ ಭಾರತ ।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ॥ |
|
ಓ ಭಾರತ, ಈ ದೇಹದೊಳಗಿನ ಜೀವ ಎಂದಿಗೂ ಯಾರಿಗೂ ಕೊಲ್ಲಲಾಗದ್ದು. ಆದ್ದರಿಂದ ಎಲ್ಲ ಜೀವಿಗಳ ಬಗೆಗೂ ನೀನು ದುಃಖಿಸುವಂತಿಲ್ಲ. |
|
31
|
ಸ್ವ-ಧರ್ಮಮಪಿ ಚಾವೇಕ್ಷ್ಯ ನ ವಿ-ಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ॥ |
|
ನಿನ್ನ ಧರ್ಮ ಕ್ಷಾತ್ರವೆಂದು ನೆನೆದುಕೊಂಡರೂ ನೀನು ಗೊಂದಲಪಡಲಾರೆ. ಕ್ಷತ್ರಿಯನಿಗೆ ಧರ್ಮಕ್ಕಾಗಿ ಹೋರಾಟಕ್ಕಿಂತ ಹೆಚ್ಚಿನ ಒಳಿತು ಬೇರೆ ಕರ್ಮದಿಂದ ಇಲ್ಲ. |
|
32
|
ಯದೃಚ್ಛಯಾ ಚೋಪ-ಪನ್ನಂ ಸ್ವರ್ಗ-ದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ॥ |
|
ದೈವೇಚ್ಛೆಯಿಂದ ಈ ಯುದ್ಧಕರ್ಮ ಬಂದೊದಗಿದೆ. ಸ್ವರ್ಗದ ಬಾಗಿಲು ತೆರೆದಿದೆ. ಓ ಪಾರ್ಥನೆ, ದುಃಖಪಡದ ಕ್ಷತ್ರಿಯರು ಇಂಥ ಯುದ್ಧವನ್ನು ಎದುರಿಸುತ್ತಾರೆ. |
|
33
|
ಅಥ ಚೇತ್ ತ್ವಂ ಧರ್ಮ್ಯಮಿಮಂ ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವ-ಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ॥ |
|
ಒಂದೊಮ್ಮೆ ನೀನು ಈ ಧರ್ಮಯುದ್ಧವನ್ನು ಮಾಡದಿದ್ದರೆ ಸ್ವಧರ್ಮ ಬಿಟ್ಟವನೆಂಬ ಅಪಕೀರ್ತಿ ಪಡೆವೆ, ಸ್ವಧರ್ಮ ತೊರೆದ ಪಾಪವನ್ನೂ ಪಡೆವೆ. |
|
34
|
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇಽವ್ಯಯಾಮ್ ।
ಸಂ-ಭಾವಿತಸ್ಯ ಚಾಕೀರ್ತಿಃ ಮರಣಾದತಿ-ರಿಚ್ಯತೇ ॥ |
|
ನಿನ್ನ ಬಗ್ಗೆ ಜನರು ಆಡುವ ನಿಂದೆಯ ಮಾತೂ ಮುಗಿಯದು. ಸಮಾಜದಲ್ಲಿ ಒಳ್ಳೆಯವನೆಂದು ಪ್ರಸಿದ್ಧನಾದವನಿಗೆ ನಿಂದೆ ಸಾವಿಗಿಂತ ಮಿಗಿಲು. |
|
35
|
ಭಯಾದ್ ರಣಾದುಪ-ರತಂ ಮಂಸ್ಯಂತೇ ತ್ವಾಂ ಮಹಾರಥಾಃ ।
ಯೇಷಾಂ ಚ ತ್ವಂ ಬಹು-ಮತೋ ಭೂತ್ವಾ ಯಾಸ್ಯಸಿ ಲಾಘವಮ್ ॥ |
|
ಯುದ್ಧಕ್ಕೆ ಹೆದರಿ ಹಿಂದೆ ಹೋದನೆಂದು ನಿನ್ನನ್ನು ಮಹಾರಥರು ನಂಬುತ್ತಾರೆ. ಈ ಮೊದಲು ಯಾರಿಗೆಲ್ಲ ನೀನು ದೊಡ್ಡವನೆನಿಸಿ ಗೌರವಕ್ಕೆ ಪಾತ್ರನಾಗಿದ್ದೀಯೊ, ಅವರಿಗೆ ಈಗ ನೀನು ಏನೂ ಅಲ್ಲದ ಸಣ್ಣವನಾಗುತ್ತೀಯ. |
|
36
|
ಅವಾಚ್ಯ-ವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖ-ತರಂ ನು ಕಿಮ್ ॥ |
|
ನಿನ್ನ ವೈರಿಗಳು ನಿನ್ನ ಬಲವನ್ನು ಹೀಯಾಳಿಸುತ್ತ ನಿನ್ನ ಬಗ್ಗೆ ಬಹಳ ಕೆಟ್ಟ ಪದಗಳನ್ನು ಹೇಳುತ್ತಲೇ ಇರುತ್ತಾರೆ. ಇದಕ್ಕಿಂತ ಬೇರೆ ದುಃಖದ ಸಂಗತಿ ಏನಿದೆ? |
|
37
|
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ।
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತ-ನಿಶ್ಚಯಃ ॥ |
|
ಸತ್ತರೆ ಸ್ವರ್ಗ ಪಡೆವೆ, ಗೆದ್ದರೆ ನೆಲವನ್ನು ಆಳುವೆ. ಹಾಗಾಗಿ ಓ ಕೌಂತೇಯನೇ, ಯುದ್ಧಮಾಡುವೆನೆಂದು ನಿಶ್ಚೈಸಿ ಎದ್ದುನಿಲ್ಲು. |
|
38
|
ಸುಖ-ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥ |
|
ಸುಖ-ದುಃಖಗಳನ್ನು, ಲಾಭ-ನಷ್ಟಗಳನ್ನು, ಗೇಲು-ಸೋಲುಗಳನ್ನು ಸಮವಾಗಿಸಿಕೊಂಡು ಮತ್ತೆ ಯುದ್ಧಕ್ಕೆ ಸಿದ್ಧನಾಗು, ಹೀಗಾದರೆ ಪಾಪವನ್ನು ಹೊಂದಲಾರೆ. |
|
39
|
ಏಷಾ ತೇಽಭಿ-ಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು ।
ಬುದ್ಧ್ಯಾಯುಕ್ತೋ ಯಯಾ ಪಾರ್ಥ ಕರ್ಮ-ಬಂಧಂ ಪ್ರಹಾಸ್ಯಸಿ ॥ |
|
ಪಾರ್ಥನೆ, ಜ್ಞಾನದ ವಿಷಯದಲ್ಲಿ ನಿನಗೆ ಹೀಗೆ ಬುದ್ಧಿ ಹೇಳಿದೆ. ಅದನ್ನು ಪ್ರಾಯೋಗಿಕವಾಗಿ ಹೇಗೆ ಎನ್ನುವುದನ್ನು ಈಗ ಕೇಳು. ಕೇಳಿ, ತಿಳಿದದ್ದರಿಂದ ಕರ್ಮದ ಗಂಟನ್ನು ಬಿಚ್ಚಿಕೊಳ್ಳಬಲ್ಲೆ. |
|
40
|
ನೇಹಾಭಿ-ಕ್ರಮ-ನಾಶೋಽಸ್ತಿ ಪ್ರತ್ಯವಾಯೋ ನ ವಿದ್ಯತೇ ।
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥ |
|
ಇಲ್ಲಿ ಆರಂಭ ಮಾತ್ರ ಮಾಡಿದರೂ ನಿಂತು ಹೋಗದು, ದೋಷ ಬರದು. ಶಾಸ್ತ್ರ ಹೇಳಿದ ಈ ಧರ್ಮವನ್ನು ಅತಿಕಡಿಮೆ ನಡೆಸಿದರೂ ದೊಡ್ಡ ಆಪತ್ತಿನಿಂದ ರಕ್ಷಣೆ ಇದೆ. |
|
41
|
ವ್ಯವಸಾಯಾತ್ಮಿಕಾ ಬುದ್ಧಿಃ ಏಕೇಹ ಕುರು-ನಂದನ ।
ಬಹು-ಶಾಖಾ ಹ್ಯನಂತಾಶ್ಚ ಬುದ್ಧಯೋಽವ್ಯವಸಾಯಿನಾಮ್ ॥ |
|
ಕುರುಕುಮಾರನೇ, ಶಾಸ್ತ್ರ ಕೇಳಿ ಕಲಿತು ದೃಢವಾದ ಬುದ್ಧಿ ಒಂದೇ ರೀತಿಯದ್ದು. ಕೇಳಿ-ಕಲಿಯದವರ ಬುದ್ಧಿ ಹಲವು ರೀತಿಯದ್ದು, ಬುಡ-ಕೊನೆಯಿಲ್ಲದ್ದು. |
|
42
|
ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ ।
ವೇದ-ವಾದ-ರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ ॥ |
|
43
|
ಕಾಮಾತ್ಮಾನಃ ಸ್ವರ್ಗ-ಪರಾ ಜನ್ಮ-ಕರ್ಮ-ಫಲ-ಪ್ರದಾಮ್ ।
ಕ್ರಿಯಾ-ವಿಶೇಷ-ಬಹುಲಾಂ ಭೋಗೈಶ್ವರ್ಯ-ಗತಿಂ ಪ್ರತಿ ॥ |
|
ಓ ಪಾರ್ಥನೇ, ಅರ್ಥವನ್ನು ತಿಳಿಯದೆ ಬರಿಯ ವೇದದ ಸೊಲ್ಲಿನಲ್ಲಷ್ಟೇ ಗಟ್ಟಿಯಾದವರು ದಡ್ಡರಿವರು, ಕೆಟ್ಟ ಕಾಮನೆಗಳಿಗೆ ಒಳಗಾಗಿ ಸ್ವರ್ಗವೇ ಮುಖ್ಯ ಎನ್ನುವವರು. ಭೋಗ-ಭಾಗ್ಯಕ್ಕಾಗಿ, ಒಡೆತನಕ್ಕಾಗಿ ಬಗೆ-ಬಗೆಯ ಬಹಳ ಕರ್ಮಗಳನ್ನು ವೇದ ಹೇಳಿದೆ ಎನ್ನುವರು. ಕರ್ಮದ ಫಲವಾಗಿ ಮತ್ತೆ ಮತ್ತೆ ಹುಟ್ಟು ಕೊಡಲಿದೆ ಎನ್ನುವ (ಅರಳಿ ಉದುರುವ) ಹೂವಿನಂಥ ಮಾತನ್ನು ಹೇಳುತ್ತಾರೆ. |
|
44
|
ಭೋಗೈಶ್ವರ್ಯ-ಪ್ರಸಕ್ತಾನಾಂ ತಯಾಽಪ-ಹೃತ-ಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ ॥ |
|
ಔತಣ-ಒಡೆತನ ಇದರಲ್ಲೆ ಮುಳುಗಿದವರಿಗೆ ವೇದದ ಈ ಚೌಕಟ್ಟಿನಲ್ಲೆ ತಲೆ ಓಡಿಸಿದವರಿಗೆ ಕೇಳಿ-ಕಲಿತ ಬುದ್ಧಿಮಾತು ಸಮಾಧಾನವನ್ನು ಕೊಡದು. |
|
45
|
ತ್ರೈಗುಣ್ಯ-ವಿಷಯಾ ವೇದಾಃ ನಿಸ್ತ್ರೈಗುಣ್ಯೋ ಭವಾರ್ಜುನ ।
ನಿರ್ದ್ವಂದ್ವೋ ನಿತ್ಯ-ಸತ್ತ್ವ-ಸ್ಥೋ ನಿರ್ಯೋಗ-ಕ್ಷೇಮ ಆತ್ಮ-ವಾನ್ ॥ |
|
ವೇದಗಳು ಹೊರನೋಟಕ್ಕೆ ತ್ರಿಗುಣಗಳ ಸಂಬಂಧವನ್ನೆ ಹೊತ್ತಿವೆ. ಓ ಅರ್ಜುನ, ನೀನು ಗುಣತ್ರಯದ ಸಂಪರ್ಕದಿಂದ ದೂರನಾಗು. ದ್ವಂದ್ವಗಳಿಗೆ ವಾಲದೆ ನಿತ್ಯನಾದ ದೇವನಲ್ಲಿ ಮನಸ್ಸಿಡು. ಅವನ ನಿಯಮನದಲ್ಲಿ ನಿನ್ನ ಪ್ರಾಪ್ತಿಯನ್ನು ನೋಡು. ನಿನ್ನ ರಕ್ಷೆಯನ್ನು ತಿಳಿ. |
|
46
|
ಯಾವಾನರ್ಥ ಉದ-ಪಾನೇ ಸರ್ವತಃ ಸಂ-ಪ್ಲುತೋದಕೇ ।
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿ-ಜಾನತಃ ॥ |
|
ಬಾವಿಯಿಂದ ಏನೆಲ್ಲ ಪ್ರಯೋಜನವಾಗಲಿದೆಯೋ, ಅವೆಲ್ಲವೂ ಹರಿಯುವ ನೀರರಾಶಿಯಲ್ಲಿ ಆಗಿಯೇ ಆಗಲಿದೆ. ಹಾಗೆ ದೇವನನ್ನು ವೇದದಲ್ಲಿ ತಿಳಿದವನಿಗೆ ಎಲ್ಲ ಫಲಗಳೂ ದೊರಕಲಿವೆ. |
|
47
|
ಕರ್ಮಣ್ಯೇವಾಧಿ-ಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮ-ಫಲ-ಹೇತುರ್ಭೂಃ ಮಾ ತೇ ಸಂಗೋಽಸ್ತ್ವಕರ್ಮಣಿ ॥ |
|
ಕರ್ಮದಲ್ಲಿ ಮಾತ್ರವೇ ನಿನಗೆ ಹಕ್ಕು. ಕರ್ಮದಿಂದ ಉಂಟಾದ ಫಲಗಳನ್ನು ಪಡೆವಲ್ಲಿ ಎಂದಿಗೂ ನಿನಗೆ ಅಧಿಕಾರವಿಲ್ಲ. ಫಲವನ್ನೇ ಕಾರಣವನ್ನಾಗಿಸಿ ಕರ್ಮ ಮಾಡಬೇಡ. ಕರ್ಮ ಮಾಡದಿರುವ ಯೋಚನೆಯೂ ನಿನಗೆ ಬೇಡ. |
|
48
|
ಯೋಗ-ಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂ-ಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥ |
|
ಓ ಧನಂಜಯನೆ, ಫಲಾಸಕ್ತಿಯನ್ನು ಬಿಟ್ಟು ಯೋಗಿಯಾಗಿ ಕೆಲಸ ಮಾಡು. ಕೆಲಸ ಆದರೂ-ಆಗದಿದ್ದರೂ ಒಂದೇ ರೀತಿಯಲ್ಲಿರು. ಇಂತಹ ಸಮಸ್ಥಿತಿಯೆ ಯೋಗ. |
|
49
|
ದೂರೇಣ ಹ್ಯವರಂ ಕರ್ಮ ಬುದ್ಧಿ-ಯೋಗಾದ್ ಧನಂ-ಜಯ ।
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲ-ಹೇತವಃ ॥ |
|
ಓ ಧನಂಜಯನೆ, ಬುದ್ಧಿಯೋಗಕ್ಕಿಂತ ಕರ್ಮಯೋಗ ತುಂಬಾ ಕೀಳು. ಜ್ಞಾನಯೋಗಕ್ಕೆ ಸಿದ್ಧನಾಗು. ಫಲವನ್ನೇ ನಂಬಿದವರ ಬಗ್ಗೆ ಮರುಗಬೇಕು. |
|
50
|
ಬುದ್ಧಿ-ಯುಕ್ತೋ ಜಹಾತೀಹ ಉಭೇ ಸುಕೃತ-ದುಷ್ಕೃತೇ ।
ತಸ್ಮಾದ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ ॥ |
|
ಬುದ್ಧಿಮಂತನು ಒಳಿತು-ಕೆಡುಕುಗಳನ್ನು ಇಲ್ಲೇ ಬಿಡುತ್ತಾನೆ. ಆದ್ದರಿಂದ ಬುದ್ಧಿಯೋಗಕ್ಕೆ ಮನಸ್ಸು ಮಾಡು. ಯೋಗ ಎಂದರೆ ತಿಳಿದು ಕರ್ಮ ಮಾಡುವ ಕಲೆ. |
|
51
|
ಕರ್ಮ-ಜಂ ಬುದ್ಧಿ-ಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮ-ಬಂಧ-ವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್ ॥ |
|
ದೇವರನ್ನು ತಿಳಿದವರು ಜ್ಞಾನಯೋಗದಿಂದಾಗಿ ಕರ್ಮದ ಫಲವನ್ನು ತೊರೆದು, ಸಂಸಾರದ ಹುಟ್ಟು-ಸಾವುಗಳ ಕಟ್ಟಿನಿಂದ ಬಿಡುಗಡೆಗೊಂಡು, ತೊಂದರೆಯೆ ಇಲ್ಲದ ಪದವೆನಿಸಿದ ಮೋಕ್ಷವನ್ನು ಪಡೆಯುತ್ತಾರೆ. |
|
52
|
ಯದಾ ತೇ ಮೋಹ-ಕಲಿಲಂ ಬುದ್ಧಿರ್ವ್ಯತಿ-ತರಿಷ್ಯತಿ ।
ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥ |
|
ಯಾವಾಗ ನಿನ್ನ ಬುದ್ಧಿಯು ಅಜ್ಞಾನದ ಕೊಳೆಯನ್ನು ಕಳೆದುಕೊಳ್ಳುವುದೋ ಆಗ ಹಿಂದೆ ಕೇಳಿದ್ದರ ಮತ್ತು ಮುಂದೆ ಕೇಳಲಿರುವ ಶಾಸ್ತ್ರಪಾಠದ ಪೂರ್ತಿ ಲಾಭವನ್ನು ಪಡೆಯುವೆ. |
|
53
|
ಶ್ರುತಿ-ವಿಪ್ರತಿ-ಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ ।
ಸಮಾಧಾವಚಲಾ ಬುದ್ಧಿಃ ತದಾ ಯೋಗಮವಾಪ್ಸ್ಯಸಿ ॥ |
|
ಕೇಳಿದ್ದಕ್ಕೆ ವಿರೋಧಿಯಾಗಿದ್ದ ನಿನ್ನ ಬುದ್ಧಿ ಯಾವಾಗ ಚಂಚಲರಹಿತವಾಗಿ ಸ್ಥಿರವಾಗಿ ಸಮಾಧಿಯಲ್ಲಿ ಗಟ್ಟಿ ನಿಲ್ಲುತ್ತೋ, ಆಗ ಯೋಗವನ್ನು ಹೊಂದುವೆ. |
|
54
|
ಸ್ಥಿತ-ಪ್ರಜ್ಞಸ್ಯ ಕಾ ಭಾಷಾ ಸಮಾಧಿ-ಸ್ಥಸ್ಯ ಕೇಶವ ।
ಸ್ಥಿತ-ಧೀಃ ಕಿಂ ಪ್ರ-ಭಾಷೇತ ಕಿಮಾಸೀತ ವ್ರಜೇತ ಕಿಮ್ ॥ |
|
ಅರ್ಜುನನ ಪ್ರಶ್ನೆ - ಓ ಕೇಶವನೆ, ಸಮಾಧಿ ಸ್ಥಿತಿಯಲ್ಲಿರುವವನ ಸ್ಥಿತಪ್ರಜ್ಞನ ಲಕ್ಷಣವೇನು? ಸ್ಥಿತಪ್ರಜ್ಞನ ಮಾತು-ನಡೆ-ಇರವುಗಳು ಏನೇನು? |
|
ಭಗವಾನ್
ಉವಾಚ
|
|
55
|
ಪ್ರ-ಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ ।
ಆತ್ಮನ್ಯೇವಾಽತ್ಮನಾ ತುಷ್ಟಃ ಸ್ಥಿತ-ಪ್ರಜ್ಞಸ್ತದೋಚ್ಯತೇ ॥ |
|
ಕೃಷ್ಣನ ಉತ್ತರ - ಓ ಪಾರ್ಥನೆ, ಮನಸ್ಸಿನಲ್ಲಿನ ಬಯಕೆಗಳನ್ನೆಲ್ಲ ತೊರೆದು ಪರಮಾತ್ಮನಲ್ಲೇ ಮನಸ್ಸಿಟ್ಟು ಸಂತಸಪಡುವವ ಸ್ಥಿತಪ್ರಜ್ಞನೆನಿಸುತ್ತಾನೆ. |
|
56
|
ದುಃಖೇಷ್ವನುದ್ವಿಗ್ನ-ಮನಾಃ ಸುಖೇಷು ವಿಗತ-ಸ್ಪೃಹಃ ।
ವೀತ-ರಾಗ-ಭಯ-ಕ್ರೋಧಃ ಸ್ಥಿತ-ಧೀರ್ಮುನಿರುಚ್ಯತೇ ॥ |
|
ನಾನಾವಿಧ ದುಃಖಗಳಲ್ಲಿ ಉದ್ವೇಗಕ್ಕೆ ಒಳಗಾಗದವ, ಸುಖಸನ್ನಿವೇಶಗಳಲ್ಲಿ ಆಸೆ ಪಡೆದವ, ಅತಿಯಾಸೆ-ಹೆದರಿಕೆ-ಕೋಪಗಳನ್ನು ತೊರೆದವ, ಮುನಿಯಂತೆ ಇರುವವನೇ ಸ್ಥಿತಪ್ರಜ್ಞನು - ಬುದ್ಧಿಸ್ಥಿತನು. |
|
57
|
ಯಃ ಸರ್ವತ್ರಾನಭಿಸ್ನೇಹಃ ತತ್ತತ್ ಪ್ರಾಪ್ಯ ಶುಭಾಶುಭಮ್ ।
ನಾಭಿ ನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ |
|
ಯಾವುದರಲ್ಲೂ ಹೆಚ್ಚಿನ ಸಂಬಂಧವಿಲ್ಲ, ಒಳಿತು ಆದರೂ ಹೆಚ್ಚಿಗೆ ಸಂತಸವಿಲ್ಲ, ಕೆಡುಕಾದರೂ ಅತಿಯಾಗಿ ವಿರೋಧವಿಲ್ಲ. ಇಂಥವನು ಸ್ಥಿತಪ್ರಜ್ಞನು-ಅರಿವು ಗಟ್ಟಿಯಾದವನು. |
|
58
|
ಯದಾ ಸಂ-ಹರತೇ ಚಾಯಂ ಕೂರ್ಮೋಽಂಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ |
|
ಆಮೆ ತನ್ನ ತಲೆ, ಕೈ-ಕಾಲುಗಳನ್ನು ಒಳಗೆ ಎಳೆದುಕೊಳ್ಳುತ್ತದೆ. ಹಾಗೆ ಪ್ರಾಪಂಚಿಕ ವಿಷಯಗಳ ಸೆಳೆತಕ್ಕೆ ಒಳಗಾಗದೆ ತನ್ನ ಐದು ಜ್ಞಾನೇಂದ್ರಿಯಗಳನ್ನು ಒಳಗೆ ಇರಿಸಿಕೊಳ್ಳುವವನ ಪ್ರಜ್ಞೆ ಸ್ಥಿರವಾಗಿದೆ. |
|
59
|
ವಿಷಯಾ ವಿನಿ-ವರ್ತಂತೇ ನಿರಾಹಾರಸ್ಯ ದೇಹಿನಃ ।
ರಸ-ವರ್ಜಂ ರಸೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥ |
|
ದೇಹ ಹೊತ್ತವನು ಆಹಾರ ಕಡಿಮೆ ಮಾಡಿದಾಗ ವಿಷಯಗಳು ಮುತ್ತಲಾರವು. ಕಣ್ಣು-ಕಿವಿ-ಕೈಕಾಲುಗಳೆಲ್ಲ ಸುಮ್ಮನಾದರೂ ತಿನ್ನುವ ಸುಖಭೋಗದ ಆಸೆ ನಿಲ್ಲದು. ಇದು ಮಾತ್ರ ದೇವರನ್ನು ಕಂಡಾಗಲೇ ನಿಲ್ಲಲಿದೆ. |
|
60
|
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥ |
|
ಓ ಕೌಂತೇಯನೇ, ತಿಳಿದು ಎಷ್ಟೇ ಪ್ರಯತ್ನಿಸಿದರೂ ವ್ಯಕ್ತಿಯ ಇಂದ್ರಿಯಗಳು ಮನಸ್ಸನ್ನು ಕಲಡಿಸಿ ಎಲ್ಲಿಗೋ ಒಯ್ದು ಬಿಡುತ್ತವೆ. |
|
61
|
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ ।
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ |
|
ಆ ಇಂದ್ರಿಯಗಳನ್ನೆಲ್ಲ ನಿಗ್ರಹಿಸಿ ನಾನು ಸರ್ವೋತ್ತಮನು ಎಂದು ನಂಬಿ ನನ್ನಲ್ಲೆ ಮನಸ್ಸು ಇಡಬೇಕು. ಹೀಗೆ ಇಂದ್ರಿಯಗಳನ್ನು ಗೆದ್ದವನ ಪ್ರಜ್ಞೆ ಸ್ಥಿರವಾಗಿದೆ ಎಂದೇ ಅರ್ಥ |
|
62
|
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪ-ಜಾಯತೇ ।
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಽಭಿ-ಜಾಯತೇ ॥ |
|
63
|
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ-ವಿಭ್ರಮಃ ।
ಸ್ಮೃತಿ-ಭ್ರಂಶಾದ್ ಬುದ್ಧಿ-ನಾಶೋ ಬುದ್ಧಿ-ನಾಶಾದ್ ವಿನಶ್ಯತಿ ॥ |
|
ವಿಷಯ ಪದಾರ್ಥಗಳನ್ನೇ ನೆನೆವ ವ್ಯಕ್ತಿಗೆ ಅವುಗಳಲ್ಲೆ ನಂಟು ಬೆಳೆಯುತ್ತಾ ಹೋಗುತ್ತದೆ. ನಂಟಿನಿಂದ ಆಸೆ ಮೂಡುತ್ತದೆ. ಆಸೆ ಕೈತಪ್ಪಿದರೆ ಕೋಪ ಏಳುತ್ತದೆ. ಕೋಪದಿಂದ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯದವನಾಗುತ್ತಾನೆ. ಇಂಥ ಅರೆಜ್ಞಾನದಿಂದ ತಪ್ಪನ್ನೇ ಸರಿಯೆಂಬ ಸರಿಯನ್ನೆ ತಪ್ಪೆಂಬ ಭ್ರಮೆಗೆ ಒಳಗಾಗುವನು. ಇಂಥ ಭ್ರಮೆಯು ಬುದ್ಧಿಯನ್ನು ನಾಶಮಾಡಲಿದೆ. ಹೀಗೆ ಬುದ್ಧಿನಾಶದಿಂದ ಎಲ್ಲವೂ ನಾಶವಾಗಲಿದೆ. |
|
64
|
ರಾಗ-ದ್ವೇಷ-ವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ ।
ಆತ್ಮ-ವಶ್ಶೈರ್ವಿಧೇಯಾತ್ಮಾ ಪ್ರಸಾದಮಧಿ-ಗಚ್ಛತಿ ॥ |
|
ಬೇಕು-ಬೇಡಗಳಿಗೆ ಬಲಿಬೀಳದಂತೆ ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಂಡವನು ಗರ್ವ ಪಡದೆ ಅಂಥ ಇಂದ್ರಿಯಗಳಿಂದ ವಿಷಯಗಳನ್ನು ದೇವರಿಗೊಪ್ಪಿಸಿ ಅನುಭವಿಸಿದರೆ ಆತ ನೆಮ್ಮದಿಯನ್ನು ಪಡೆಯುವನು. |
|
65
|
ಪ್ರಸಾದೇ ಸರ್ವ-ದುಃಖಾನಾಂ ಹಾನಿರಸ್ಯೋಪ-ಜಾಯತೇ ।
ಪ್ರಸನ್ನ-ಚೇತಸೋ ಹ್ಯಾಶು ಬುದ್ಧಿಃ ಪರ್ಯವ-ತಿಷ್ಠತಿ ॥ |
|
ಈ ಬಗೆಯ ಮನಸ್ಸಿನ ನೆಮ್ಮದಿಯಿಂದ ಇವನ ಎಲ್ಲ ರೀತಿಯ ದುಃಖಗಳು ಇಲ್ಲವಾಗುತ್ತವೆ. ಮನಸ್ಸು ತಿಳಿಯಾದವನ ಬುದ್ಧಿ ಕೂಡಲೇ ದೇವರ ಸುತ್ತಲೇ ಸುತ್ತುತ್ತದೆ. |
|
66
|
ನಾಸ್ತಿ ಬುದ್ಧಿರಯುಕ್ತಸ್ಯ ನಚಾಯುಕ್ತಸ್ಯ ಭಾವನಾ ॥
ನಚಾಭಾವಯತಃ ಶಾಂತಿಃ ಅಶಾಂತಸ್ಯ ಕುತಃ ಸುಖಮ್ ॥ |
|
ಮನಸ್ಸನ್ನು ಬಗ್ಗಿಸದಿದ್ದರೆ ಬುದ್ಧಿ ಶುದ್ಧವಾಗದು. ಮನಸ್ಸು ಅಯೋಗ್ಯವಾದರೆ ಧ್ಯಾನವೂ ನಡೆಯದು. ಧ್ಯಾನವಿಲ್ಲದಿರೆ ಮೋಕ್ಷವಿಲ್ಲ. ಮೋಕ್ಷವಿಲ್ಲದಿದ್ದರೆ ಸುಖವಿಲ್ಲ. |
|
67
|
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋಽನು ವಿಧೀಯತೇ ।
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ ॥ |
|
ನೀರಿನಲ್ಲಿ ದೋಣಿಯನ್ನು ಗಾಳಿ ಎಲ್ಲೆಲ್ಲಿಗೋ ಎಳೆದೊಯ್ಯುತ್ತದೆ. ಹಾಗೆಯೇ ವಿಷಯಗಳನ್ನು ಮೆಲ್ಲುತ್ತಿರುವ ಇಂದ್ರಿಯಗಳೆಡೆಗೆ ಮನಸ್ಸು ಸಾಗಿಸಿದವನ ಪ್ರಜ್ಞೆಯೂ ದಿಕ್ಕು ತಪ್ಪಲಿದೆ. |
|
68
|
ತಸ್ಮಾದ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ |
|
ಓ ಅರ್ಜುನನೇ, ಇಂದ್ರಿಯಗಳು ಎಲ್ಲ ರೀತಿಯಿಂದಲೂ, ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯಗಳಿಂದ ಸಿಲುಕದಿದ್ದರೆ ಅವನು ಸ್ಥಿತಪ್ರಜ್ಞನೆ. |
|
69
|
ಯಾ ನಿಶಾ ಸರ್ವ-ಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥ |
|
ಎಲ್ಲ ಜೀವರು ಯಾವ ವಿಷಯದಲ್ಲಿ ಎಚ್ಚರ ತಪ್ಪಿರುವರೋ ಅಲ್ಲಿ ಇಂದ್ರಿಯಗಳನ್ನು ಗೆದ್ದವ ಎಚ್ಚರ ಇರುತ್ತಾನೆ. ಜೀವರು ಎಚ್ಚರವಿರುವ ಈ ಲೋಕದ ವಿಷಯದಲ್ಲಿ ದೇವರನ್ನು ಕಂಡ ಚಿಂತಕನಿಗೆ ಅದು ರಾತ್ರಿಯಂತೆ. |
|
70
|
ಆಪೂರ್ಯಮಾಣಮಚಲ-ಪ್ರತಿಷ್ಠಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪ್ನೋತಿ ನ ಕಾಮ-ಕಾಮೀ ॥ |
|
ನೀರುಗಳು ಎಲ್ಲೆಡೆಯಿಂದ ತುಂಬಿಕೊಳ್ಳಲು ಹರಿದು ಬಂದು ಸಮುದ್ರವನ್ನು ಧುಮುಕಿದರೂ ಸಮುದ್ರ ದಡ ಮೀರದೆ ಗಂಭೀರವಾಗಿ ಅಲ್ಲೇ ನಿಂತಿರುತ್ತದೆ. ಹೀಗೆಯೇ ಎಲ್ಲ ವಿಷಯಗಳು ಬಂದು ಸೇರಿದರೂ ಹದ್ದುಮೀರದೆ ಇರುವವನು ಮುಕ್ತಿ ಪಡೆಯುತ್ತಾನೆ. ಕೆಟ್ಟ ಬಯಕೆಯ ಬಯಸುವವ ಮುಕ್ತಿ ಪಡೆಯಲಾರ. |
|
71
|
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ ।
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿ-ಗಚ್ಛತಿ ॥ |
|
ಸಂಕಲ್ಪ-ವಿಕಲ್ಪಗಳ ತೊರೆದು ಮಮಕಾರ-ಅಹಂಕಾರವಿಲ್ಲದೆ ವಿಷಯಗಳನ್ನೆಲ್ಲ ಆಸೆ ಪಡದೆ ಅನುಭವಿಸುವವನು ಮುಕ್ತಿ ಪಡೆವನು. |
|
72
|
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿ-ಮುಹ್ಯತಿ ।
ಸ್ಥಿತ್ವಾಽಸ್ಯಾಮಂತ-ಕಾಲೇಽಪಿ ಬ್ರಹ್ಮ ನಿರ್ಬಾಣಮೃಚ್ಛತಿ ॥ |
|
ಓ ಪಾರ್ಥನೆ, ಇದು ಬ್ರಹ್ಮನನ್ನು ತಿಳಿದವರ ಲಕ್ಷಣ. ಹೀಗಾದವನು ಮತ್ತೆ ಗೊಂದಲಪಡನು. ಕೊನೆಯ ಕಾಲದಲ್ಲಿಯೂ ಹೀಗೆಯೇ ಇರುವವನು ಭೌತದೇಹವಿರದ ದೇವನನ್ನು ಪಡೆವನು. |