|
ಅರ್ಜುನ
ಉವಾಚ
|
|
1
|
ಕಿಂ ತದ್ ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।
ಅಧಿ-ಭೂತಂ ಚ ಕಿಂ ಪ್ರೋಕ್ತಂ ಅಧಿ-ದೈವಂ ಕಿಮುಚ್ಯತೇ ॥ |
|
ಅರ್ಜುನನು ಕೇಳಿದನು - ಓ ಪುರುಷೋತ್ತಮನೆ, ಯಾವುದು ಆ ಬ್ರಹ್ಮ? ಅಧ್ಯಾತ್ಮ ಎಂದರೆ ಏನು? ಕರ್ಮ ಎಂದರೆ ಏನು? ಅಧಿಭೂತ ಯಾವುದು ಮತ್ತು ಅಧಿದೈವ ಯಾವುದು? |
|
2
|
ಅಧಿ-ಯಜ್ಞಃ ಕಥಂ ಕೋಽತ್ರ ದೇಹೇಽಸ್ಮಿನ್ ಮಧು-ಸೂದನ ।
ಪ್ರಯಾಣ-ಕಾಲೇ ಚ ಕಥಂ ಜ್ಞೇಯೋಽಸಿ ನಿಯತಾತ್ಮಭಿಃ ॥ |
|
ಓ ಮಧುಸೂದನನೆ, ಇಲ್ಲಿ ಅಧಿಯಜ್ಞ ಯಾರು? ಈ ದೇಹದಲ್ಲಿ ಅಧಿಯಜ್ಞ ಹೇಗೆ? ಮನೋನಿಗ್ರಹ ಉಳ್ಳವನು ಸಾಯುವಾಗ ನಿನ್ನನ್ನು ಹೇಗೆ ತಿಳಿಯಬೇಕು? |
|
ಭಗವಾನ್
ಉವಾಚ
|
|
3
|
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಽಧ್ಯಾತ್ಮಮುಚ್ಯತೇ ।
ಭೂತ-ಭಾವೋದ್ಭವ-ಕರೋ ವಿಸರ್ಗಃ ಕರ್ಮ-ಸಂಜ್ಞಿತಃ ॥ |
|
ಕೃಷ್ಣನು ಹೇಳಿದನು - ನಾಶವಿಲ್ಲದ್ದು, ರ‍್ವೋತ್ತಮವಾದದ್ದು ಬ್ರಹ್ಮ. ಜೀವಸ್ವರೂಪ ಮತ್ತು ಜೀವನಿಗೆ ಸಂಬಂಧಿಸಿದ ದೇಹ ಅಧ್ಯಾತ್ಮ ಎನಿಸಿದೆ. ಜೀವ-ಜಡಗಳ ಹುಟ್ಟಿಗೆ ಕಾರಣನಾದ ದೇವರ ವಿವಿಧ ಸೃಷ್ಟಿಯು ಕರ್ಮ ಎನಿಸಿದೆ. |
|
4
|
ಅಧಿ-ಭೂತಂ ಕ್ಷರೋ ಭಾವಃ ಪುರುಷಶ್ಚಾಧಿ-ದೈವತಮ್ ।
ಅಧಿ-ಯಜ್ಞೋಽಹಮೇವಾತ್ರ ದೇಹೇ ದೇಹ-ಭೃತಾಂ ವರ ॥ |
|
ನಾಶವಾಗುವ ಪ್ರಪಂಚ ಅಧಿಭೂತ. ದೇಹ ಎಂಬ ಪುರವನ್ನು ನಡೆಸುವ ಶ್ರೀ, ಪ್ರಾಣ, ಶೇಷರು ಅಧಿದೈವರು. ಓ ವೀರನೇ, ಈ ಜೀವರೆಲ್ಲರ ಪ್ರತಿಯೊಂದು ದೇಹದಲ್ಲಿಯೂ ನಾನೇ ಅಧಿಯಜ್ಞ. |
|
5
|
ಅಂತ-ಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಳೇಬರಮ್ ।
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥ |
|
ಸಾಯುವಾಗ ನನ್ನನ್ನೇ ಸ್ಮರಿಸುತ್ತ ದೇಹವನ್ನು ಬಿಟ್ಟು ಹೋಗುವವನು ನಿಶ್ಚಯವಾಗಿಯೂ ನನ್ನ ಲೋಕವನ್ನು ಸೇರುತ್ತಾನೆ. |
|
6
|
ಯಂ-ಯಂ ವಾಽಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ ।
ತಂ-ತಮೇವೈತಿ ಕೌಂತೇಯ ಸದಾ ತದ್ಭಾವ-ಭಾವಿತಃ ॥ |
|
ಓ ಕೌಂತೇಯನೆ, ಸಾಯುವಾಗ ಯಾವ ಯಾವ ಸಂಗತಿಯನ್ನು ನೆನೆಯುತ್ತಾ ದೇಹವನ್ನು ಬಿಡುತ್ತಾನೋ, ಅದನ್ನೇ ಮತ್ತೆ ಪಡೆಯುತ್ತಾನೆ. ಏಕೆಂದರೆ ನಿತ್ಯ ಅದೇ ಸಂಗತಿಯಲ್ಲಿಯೇ ಆಸಕ್ತನಾಗಿದ್ದರಿಂದ. |
|
7
|
ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।
ಮಯ್ಯರ್ಪಿತ-ಮನೋ-ಬುದ್ಧಿಃ ಮಾಮೇವೈಷ್ಯಸ್ಯಸಂಶಯಮ್ ॥ |
|
ಆದ್ದರಿಂದ ಯಾವಾಗಲೂ ನನ್ನನ್ನೇ ನೆನೆಯುತ್ತಿರು. ನನ್ನಲ್ಲಿ ಮನಸ್ಸಿಟ್ಟು ಯಾವಾಗಲೂ ನನಗಾಗಿ ಹೋರಾಡು. ನಿಶ್ಚಯವಾಗಿಯೂ ನನ್ನನ್ನೇ ಸೇರುವೆ. |
|
8
|
ಅಭ್ಯಾಸ-ಯೋಗ-ಯುಕ್ತೇನ ಚೇತಸಾಽನನ್ಯ-ಗಾಮಿನಾ ।
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನು-ಚಿಂತಯನ್ ॥ |
|
ಓ ಪಾರ್ಥನೆ, ಬೇರೆ ಏನನ್ನೂ ನೆನೆಯದ ಮನಸ್ಸಿನಿಂದ, ಪುರುಷೋತ್ತಮನನ್ನು ಭಕ್ತಿಯಿಂದ ಮತ್ತೆ ಮತ್ತೆ ಧ್ಯಾನಿಸಿದಾಗ, ಎಲ್ಲಕ್ಕಿಂತ ಬೇರೆಯಾದ ದೇವನನ್ನು ಪಡೆಯುತ್ತಾನೆ. |
|
9
|
ಕವಿಂ ಪುರಾಣಮನು-ಶಾಸಿತಾರಂ
ಅಣೋರಣೀಯಾಂಸಮನು-ಸ್ಮರೇದ್ ಯಃ ।
ಸರ್ವಸ್ಯ ಧಾತಾರಮಚಿಂತ್ಯ-ರೂಪಂ
ಆದಿತ್ಯ-ವರ್ಣಂ ತಮಸಃ ಪರಸ್ತಾತ್ ॥ |
|
ಎಲ್ಲವನ್ನು ತಿಳಿದ, ಎಲ್ಲಕ್ಕಿಂತ ಮೊದಲು ಇದ್ದ, ಎಲ್ಲವನ್ನು ನಿಯಮಿಸುವ, ಅಣುವಿಗಿಂತಲು ಸೂಕ್ಷ್ಮನಾದ, ಎಲ್ಲವನ್ನು ಹೊತ್ತು ಸಾಕುವ, ಯೋಚನೆಗೆ ಸಿಗಲಾರದ ರೂಪವುಳ್ಳ, ಪ್ರಕೃತಿಗಿಂತ ಮಿಗಿಲಾದ, ಸೂರ್ಯನೊಳಗಿನ ತೇಜಸ್ಸನ್ನು ಯೋಗಿಯು ನಿರಂತರ ಧ್ಯಾನಿಸಬೇಕು. |
|
10
|
ಪ್ರಯಾಣ-ಕಾಲೇ ಮನಸಾಽಚಲೇನ
ಭಕ್ತ್ಯಾಯುಕ್ತೋ ಯೋಗ-ಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್
ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥ |
|
ಪುರುಷೋತ್ತಮನನ್ನು ಚೆನ್ನಾಗಿ ತಿಳಿದು ಪ್ರೀತಿಸಿದ ಯೋಗಿಯು ಸಾಯುವಾಗ ಸ್ಥಿರವಾದ ಮನಸ್ಸಿನಿಂದ, ಯೋಗಸಾಮರ್ಥ್ಯದಿಂದ, ಉಸಿರನ್ನು ಹುಬ್ಬುಗಳ ನಡುವೆ ಬಂಧಿಸಿ ದೇವನ ಬಳಿಗೆ ಸಾಗುತ್ತಾನೆ. |
|
11
|
ಯದಕ್ಷರಂ ವೇದ-ವಿದೋ ವದಂತಿ
ವಿಶಂತಿ ಯದ್ ಯತಯೋ ವೀತ-ರಾಗಾಃ ।
ಯದಿಚ್ಛಂತೋ ಬ್ರಹ್ಮ-ಚರ್ಯಂ ಚರಂತಿ
ತತ್ ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥ |
|
ವೇದಗಳನ್ನು ತಿಳಿದವರು ಅವನನ್ನು ಅಕ್ಷರ ಎನ್ನುತ್ತಾರೆ. ವೈರಾಗ್ಯವುಳ್ಳ ಯತಿಗಳು ಅವನನ್ನು ಸೇರುತ್ತಾರೆ. ಅವನನ್ನು ಬಯಸಿಯೇ ಬ್ರಹ್ಮಚರ್ಯವನ್ನು ನಡೆಸುತ್ತಾರೆ. ನಿನಗೆ ಅವನ ಸ್ವರೂಪವನ್ನು ಸಂಕ್ಷೇಪವಾಗಿ ಹೇಳುತ್ತೇನೆ. |
|
12
|
ಸರ್ವ-ದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುದ್ಧ್ಯ ಚ ।
ಮೂರ್ಧ್ನ್ಯಾರ್ಯಧಾಯಾಽತ್ಮನಃ ಪ್ರಾಣಂ ಆಸ್ಥಿತೋ ಯೋಗ-ಧಾರಣಾಮ್ ॥ |
|
ಕಣ್ಣು ಕಿವಿ ಮುಂತಾದ ಎಲ್ಲಾ ಬಾಗಿಲುಗಳನ್ನು ಮುಚ್ಚಿಟ್ಟು, ಮನಸ್ಸನ್ನು ದೇವರಲ್ಲಿ ನೆಲೆಸಿಟ್ಟು, ತನ್ನ ಉಸಿರನ್ನು ನೆತ್ತಿಯಲ್ಲಿಗೆ ತಂದು ಧ್ಯಾನವನ್ನು ನಡೆಸಬೇಕು. |
|
13
|
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನು-ಸ್ಮರನ್ ।
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ॥ |
|
ಓಂ ಎಂಬ ಏಕಾಕ್ಷರ ಮಂತ್ರವನ್ನು ಜಪಿಸುತ್ತಾ, ನನ್ನನ್ನು ನಿರಂತರ ನೆನೆಯುತ್ತ, ದೇಹವನ್ನು ಬಿಟ್ಟು ಹೊರಟವನು ಉತ್ತಮವಾದ ಗತಿಯನ್ನು ಹೊಂದುತ್ತಾನೆ. |
|
14
|
ಅನನ್ಯ-ಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ ।
ತಸ್ಯಾಹಂ ಸುಲಭಃ ಪಾರ್ಥ ನಿತ್ಯ-ಯುಕ್ತಸ್ಯ ಯೋಗಿನಃ ॥ |
|
ಓ ಪಾರ್ಥನೆ, ಬೇರೇನನ್ನೂ ನೆನೆಯದೆ ಪ್ರತಿದಿನವೂ ನಿರಂತರವಾಗಿ ನನ್ನನ್ನೆ ಸ್ಮರಿಸುವ ಧ್ಯಾನಯೋಗಿಗೆ ನಾನು ಆಯಾಸವಿಲ್ಲದೆ ಸಿಗುವೆನು. |
|
15
|
ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ ।
ನಾಽಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ॥ |
|
ನನ್ನನ್ನು ಪಡೆದ ಮೇಲೆ ಮತ್ತೆ ಹುಟ್ಟಿ ಬರುವುದಿಲ್ಲ. ದುಃಖದ ತಾಣವಾದ ನರಕವನ್ನು ಹೊಂದಲಾರರು. ನಿತ್ಯವಿಲ್ಲದ ಸಂಸಾರವನ್ನು ಪಡೆಯುವುದಿಲ್ಲ. ಮುಕ್ತಜೀವರು ಎನಿಸುತ್ತಾರೆ. ಮೋಕ್ಷವನ್ನು ಸೇರುತ್ತಾರೆ. |
|
16
|
ಆ ಬ್ರಹ್ಮ-ಭುವನಾಲ್ಲೋಕಾಃ ಪುನರಾವರ್ತಿನೋಽರ್ಜುನ ।
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ॥ |
|
ಓ ಕುಂತಿಯ ಪುತ್ರನಾದ ಅರ್ಜುನನೇ, ಬ್ರಹ್ಮಲೋಕದವರೆಗಿನ ಎಲ್ಲಾ ಲೋಕಗಳಿಂದಲೂ ಹಿಂದೆ ಬಂದು ಹುಟ್ಟಲಿದೆ. ನನ್ನ ಹೊಂದಿದ ಮೇಲೆ ಮತ್ತೆ ಹುಟ್ಟು ಇಲ್ಲ. |
|
17
|
ಸಹಸ್ರ-ಯುಗ-ಪರ್ಯಂತಂ ಅಹರ್ಯದ್ ಬ್ರಹ್ಮಣೋ ವಿದುಃ ।
ರಾತ್ರಿಂ ಯುಗ-ಸಹಸ್ರಾಂತಾಂ ತೇಽಹೋರಾತ್ರ-ವಿದೋ ಜನಾಃ ॥ |
|
ನಾಲ್ಕು ಯುಗಗಳು ಸಾವಿರವಾದಾಗ ಚತುರ್ಮುಖ ಬ್ರಹ್ಮನ ಒಂದು ಹಗಲು ಕಾಲವೆಂದು ತಿಳಿಯುವರು. ರಾತ್ರಿಯೂ ಅಷ್ಟೇ ಸಾವಿರ ಯುಗಚಕ್ರಗಳು ಎಂದು ತಿಳಿಯುವರು. ಇವರು ದಿನವನ್ನು ತಿಳಿದವರು. |
|
18
|
ಅವ್ಯಕ್ತಾದ್ ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ ।
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತ-ಸಂಜ್ಞಕೇ ॥ |
|
ಕಾಣಿಸಿಕೊಳ್ಳದ ದೇವರಿಂದ ಹಗಲಾದಾಗ ಕಾಣುವ ಈ ಎಲ್ಲವೂ ಹುಟ್ಟಿಬರುತ್ತವೆ. ರಾತ್ರಿಯಾದಾಗ ಅದೇ ಕಾಣದ ದೇವರಲ್ಲಿ ಲಯಗೊಳ್ಳುತ್ತವೆ. |
|
19
|
ಭೂತ-ಗ್ರಾಮಃ ಸ ಏವಾಯಂ ಭೂತ್ವಾ-ಭೂತ್ವಾ ಪ್ರಲೀಯತೇ ।
ರಾತ್ರ್ಯಾಗಮೇಽವಶಃ ಪಾರ್ಥ ಪ್ರಭವತ್ಯಹರಾಗಮೇ ॥ |
|
ಓ ಪಾರ್ಥನೆ, ದೇವನ ಇಚ್ಛೆಯಂತೆ ಪಂಚಭೂತಗಳ ರಾಶಿ ಮತ್ತೆ ಮತ್ತೆ ಹುಟ್ಟುತ್ತ ರಾತ್ರಿಯಾದಾಗ ಲಯಗೊಳ್ಳುತ್ತದೆ. ಹಗಲಾದಾಗ ಮತ್ತೆ ಒಟ್ಟು ಸೇರುತ್ತದೆ. |
|
20
|
ಪರಸ್ತಸ್ಮಾತ್ತು ಭಾವೋಽನ್ಯೋಽವ್ಯಕ್ತೋ ವ್ಯಕ್ತಾತ್ ಸನಾತನಃ ।
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ॥ |
|
ಈ ಕಾಣುವ ವಿಶ್ವಕ್ಕಿಂತ ಬೇರೆಯಾದವನು ಮತ್ತು ಉತ್ತಮನು ಕಾಣದ ದೇವನು. ಈ ಎಲ್ಲ ಭೂತಗಳು ನಾಶ ಹೊಂದಿದಾಗಲೂ ಯಾವ ರೀತಿಯಿಂದಲೂ ನಾಶವಾಗದವನು, ಎಂದೆಂದೂ ಇರುವವನು ಈ ಅವ್ಯಕ್ತನು. |
|
21
|
ಅವ್ಯಕ್ತೋಽಕ್ಷರ ಇತ್ಯುಕ್ತಃ ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ ತದ್ ಧಾಮ ಪರಮಂ ಮಮ ॥ |
|
ಈ ಅವ್ಯಕ್ತನು ಅಕ್ಷರನು ಎನಿಸಿದ್ದಾನೆ. ಅವನನ್ನೇ ಕೊನೆಯದಾಗಿ ಸೇರಬೇಕು ಎನ್ನುತ್ತಾರೆ. ಅವನನ್ನು ಪಡೆದವರು ಮತ್ತೆ ಸಂಸಾರಕ್ಕೆ ಬರುವುದಿಲ್ಲ. ಅವನು ನಾನೇ. ಆ ಉತ್ತಮ ತಾಣ ನನ್ನ ಲೋಕ. |
|
22
|
ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ ।
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ॥ |
|
ಓ ಪಾರ್ಥನೆ, ಬೇರೆ ದೇವತೆಗಳಲ್ಲಿ ಮಾಡದ, ಅವನಲ್ಲಿ ಮಾತ್ರವೇ ಮಾಡಿದ ಭಕ್ತಿಯಿಂದ ಆ ಪುರುಷೋತ್ತಮನು ಸಿಗುವನು. ಅವನ ಒಳಗೆ ಎಲ್ಲವೂ ಇದೆ. ಅವನು ಈ ಎಲ್ಲವನ್ನೂ ಆವರಿಸಿದ್ದಾನೆ. |
|
23
|
ಯತ್ರ ಕಾಲೇ ತ್ವನಾವೃತ್ತಿಂ ಆವೃತ್ತಿಂ ಚೈವ ಯೋಗಿನಃ ।
ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ ॥ |
|
ಓ ಭರತವಂಶಶ್ರೇಷ್ಠನೆ, ಯೋಗಿಗಳು ಯಾವ ಕಾಲದಲ್ಲಿ ಸತ್ತರೆ (ಕಾಲನಿಯಾಮಕರಾದ ದೇವತೆಗಳ ದಾರಿಯಲ್ಲಿ ಸಾಗಿದರೆ) ಮತ್ತೆ ಸಂಸಾರಕ್ಕೆ ಬರುವುದಿಲ್ಲ, ಮತ್ತು ಯಾವ ಕಾಲದಲ್ಲಿ ತೆರಳಿದಾಗ ಬರುತ್ತಾರೆ ಅಂಥ ಕಾಲ ವಿಚಾರವನ್ನು ಹೇಳುತ್ತೇನೆ. |
|
24
|
ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮ-ವಿದೋ ಜನಾಃ ॥ |
|
ಅಗ್ನಿ, ಜ್ಯೋತಿ, ಹಗಲು, ಶುಕ್ಲಪಕ್ಷ, ಉತ್ತರಾಯಣ ಕಾಲದ ಆರು ತಿಂಗಳು ಮತ್ತು ಉತ್ತರಾಯಣ - ಈ ಕಾಲನಿಯಾಮಕರ ದಾರಿಯಲ್ಲಿ ತೆರಳಿದ ಬ್ರಹ್ಮಜ್ಞಾನಿಗಳು ಮತ್ತೆ ಹುಟ್ಟಿ ಬರುವುದಿಲ್ಲ. ದೇವನನ್ನು ಸೇರುತ್ತಾರೆ. |
|
25
|
ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಂ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ ॥ |
|
ಹೊಗೆ, ರಾತ್ರಿ, ಕೃಷ್ಣಪಕ್ಷ, ದಕ್ಷಿಣಾಯನ ಕಾಲದ ಆರು ತಿಂಗಳು ಮತ್ತು ದಕ್ಷಿಣಾಯನ - ಈ ಕಾಲನಿಯಾಮಕರ ದಾರಿಯಲ್ಲಿ ತೆರಳಿದ ಯೋಗಿಯು ಚಂದ್ರನ ಬೆಳಕಿನ ಲೋಕವನ್ನು ಸೇರಿ ಮತ್ತೆ ಭೂಮಿಗೆ ಹುಟ್ಟಿಬರುತ್ತಾನೆ. |
|
26
|
ಶುಕ್ಲ-ಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ ।
ಏಕಯಾ ಯಾತ್ಯನಾವೃತ್ತಿಂ ಅನ್ಯಯಾಽಽವರ್ತತೇ ಪುನಃ ॥ |
|
ಇವು ವಿಶ್ವದ ಬಿಳಿ ಮತ್ತು ಕಪ್ಪು ದಾರಿಗಳು. ಎಂದೆಂದೂ ಇರುತ್ತವೆ ಎಂದು ಶಾಸ್ತ್ರಗಳ ಮಾತು. ಒಂದರಿಂದ ಮತ್ತೆ ಬರುವುದಿಲ್ಲ, ಇನ್ನೊಂದರಿಂದ ಮತ್ತೆ ಬರುತ್ತಾನೆ. |
|
27
|
ನೈತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ ಸರ್ವೇಷು ಕಾಲೇಷು ಯೋಗ-ಯುಕ್ತೋ ಭವಾರ್ಜುನ ॥ |
|
ಓ ಪಾರ್ಥನೆ, ಈ ಎರಡು ದಾರಿಗಳನ್ನು ತಿಳಿದ ಯಾವ ಯೋಗಿಯೂ ಮೋಹಗೊಳ್ಳುವುದಿಲ್ಲ. ಓ ಅರ್ಜುನನೆ, ಆದ್ದರಿಂದ ಯಾವಾಗಲೂ ಯೋಗದೊಡನೆ ಇರು. |
|
28
|
ವೇದೇಷು ಯಜ್ಞೇಷು ತಪಸ್ಸು ಚೈವ
ದಾನೇಷು ಯತ್ಪುಣ್ಯ-ಫಲಂ ಪ್ರದಿಷ್ಟಮ್ ।
ಅತ್ಯೇತಿ ತತ್ ಸರ್ವಮಿದಂ ವಿದಿತ್ವಾ
ಯೋಗೀ ಪರಂ ಸ್ಥಾನಮುಪೈತಿ ಚಾಽದ್ಯಮ್ ॥ |
|
ಇದನ್ನು ತಿಳಿದ ಯೋಗಿಯು ಯಜ್ಞ - ದಾನ - ತಪಸ್ಸುಗಳಿಗೆ ಮತ್ತು ವೇದದ ಓದಿಗೆ ಹೇಳಿದ ಪುಣ್ಯಫಲವನ್ನೆಲ್ಲ ಮೀರುತ್ತಾನೆ. ಎಲ್ಲಕ್ಕೂ ಮೊದಲು ಇರುವ ಶ್ರೇಷ್ಠ ತಾಣವನ್ನು ಹೊಂದುತ್ತಾನೆ. |